ಅಭಿಪ್ರಾಯ / ಸಲಹೆಗಳು

ಪಶುಪಾಲನಾ ಇಲಾಖೆ

 

 ಪಶು ಭಾಗ್ಯ ಯೋಜನೆಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ:

 

  • ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ ರೂ.1.20 ಲಕ್ಷದ ವರೆಗೆ ಸಾಲ ಪಡೆದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ಪ.ಜಾ. ಮತ್ತು ಪ.ಪಂ. ದವರಿಗೆ ಶೇ.33 ಹಾಗೂ ಇತರೆ ಜನಾಂಗದವರಿಗೆ ಶೇ.25 ರಷ್ಟು ಬ್ಯಾಕ್‍ ಎಂಡೆಡ್ ಸಹಾಯಧನ ಒದಗಿಸಲಾಗುವುದು. (ಪ.ಜಾ. ಮತ್ತು ಪ.ಪಂ. ದವರಿಗೆ ಸಹಾಯಧನವನ್ನು ಪಶು ಭಾಗ್ಯ ಯೋಜನೆಯ ಆಡಳಿತಾತ್ಮಕ ಅನುಮೋದನೆ ಸರ್ಕಾರಿ ಆದೇಶ, ದಿನಾಂಕ 04-08-2015 ರಲ್ಲಿ ಶೇ.33 ರಿಂದ ಶೇ.50 ಕ್ಕೆ ಪರಿಷ್ಕರಿಸಲಾಗಿದೆ).

  • ಬೆಳೆ ಸಾಲದ ಮಾದರಿಯಲ್ಲಿ, ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೂ. 50,000/- ವರೆಗೆ ಪಶು ಆಹಾರ / ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲ ಒದಗಿಸಲಾಗುವುದು.

  • ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳಿಗೆ 5 ರಾಸುಗಳವರೆಗೆ ವಿಮಾ ಕಂತುಗಳನ್ನು ಪಾವತಿಸಲು ಸಹಾಯಧನ ಒದಗಿಸಲಾಗುವುದು.

  • ಕುರಿಗಾಹಿ ಸುರಕ್ಷಾ ಯೋಜನೆಯಡಿ ನೀಡುತ್ತಿರುವ ರೂ.5,000/- ಪರಿಹಾರ ಧನವನ್ನು (exgratia) ಮುಂದುವರೆಸಲಾಗುವುದು. ಈ ಕಾರ್ಯಕ್ರಮಕ್ಕೆ ರೂ.5.00 ಕೋಟಿ ಅನುದಾನವನ್ನು ನೀಡಲಾಗುವುದು.

ಇತರೆ ಕಾರ್ಯಕ್ರಮ ಹಾಗೂ ಸವಲತ್ತುಗಳು:

ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಇನ್ನಿತರೆ ಕಾರ್ಯಕ್ರಮ ಹಾಗೂ ಒದಗಿಸುತ್ತಿರುವ ಸವಲತ್ತುಗಳು ಕೆಳಕಂಡಂತಿವೆ:

  • ಕೇಂದ್ರ ಪುರಸ್ಕೃತ ಯೋಜನೆಗಳು (CSS).

  • ದೊಡ್ಡರೋಗ ನಿರ್ಮೂಲನಾ ಯೋಜನೆ (NPRE)

  • ಪ್ರಾಣಿ ರೋಗ ತಡೆಗಟ್ಟುವಿಕೆಗೆ ರಾಜ್ಯಗಳಿಗೆ ನೆರವು (ASCAD)

  • ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮ (FMD-CP)

  • ರಾಷ್ಟ್ರೀಯ ಪ್ರಾಣಿ ರೋಗ ವರದಿ ವ್ಯವಸ್ಥೆ (NADRS)

  • ರಾಷ್ಟ್ರೀಯ ಪಿ.ಪಿ.ಆರ್. ನಿಯಂತ್ರಣ ಕಾರ್ಯಕ್ರಮ (NCP-PPR)

  • ರಾಷ್ಟ್ರೀಯ ಬ್ರೂಸೆಲ್ಲಾ ನಿಯಂತ್ರಣ ಕಾರ್ಯಕ್ರಮ

  • ಪಶುವೈದ್ಯಕೀಯ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳ ಸ್ಥಾಪನೆ ಹಾಗೂ ಬಲವರ್ಧನೆ (ESVHD)

  • ತಳಿ ಅಭಿವೃದ್ಧಿ

  • ಜಾನುವಾರು ವಿಮಾ ಯೋಜನೆ

  • ವಿಶೇಷ ಜಾನುವಾರು ಅಭಿವೃದ್ಧಿ ಯೋಜನೆ

  • ವಿಶೇಷ ಘಟಕ ಯೋಜನೆ (SCSP)

  • ಗಿರಿಜನ ಉಪ ಯೋಜನೆ (TSP)

  • ಬರಡು ರಾಸು ಚಿಕಿತ್ಸಾ ಶಿಬಿರ

  • ಮೇವು ಅಭಿವೃದ್ಧಿ ಯೋಜನೆ

  • ರೈತರ ತರಬೇತಿ ಕಾರ್ಯಕ್ರಮ, ಇತರೆ.

ಇತ್ತೀಚಿನ ನವೀಕರಣ​ : 08-01-2020 03:05 PM ಅನುಮೋದಕರು: admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080